ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಎಂಟನೆಯ ತಿರುಮುರೈ
76 ದಶಕಗಳು, 1058 ವಚನಗಳು
01 ತಿರುವಾಸಹಂ-ಸಿವಬುರಾಣಂ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1
ವಚನದ ಸಂಖ್ಯೆ:1

நமச்சிவாய வாஅழ்க நாதன்தாள் வாழ்க
இமைப்பொழுதும் என்நெஞ்சில் நீங்காதான் தாள்வாழ்க
கோகழி யாண்ட குருமணிதன் தாள்வாழ்க
ஆகம மாகிநின் றண்ணிப்பான் தாள்வாழ்க
ஏகன் அநேகன் இறைவ னடிவாழ்க 5
வேகங் கெடுத்தாண்ட வேந்தனடி வெல்க
பிறப்பறுக்கும் பிஞ்ஞகன்றன் பெய்கழல்கள் வெல்க
புறத்தார்க்குச் சேயோன்றன் பூங்கழல்கள் வெல்க
கரங்குவிவார் உள்மகிழுங் கோன்கழல்கள் வெல்க
சிரங்குவிவார் ஓங்குவிக்குஞ் சீரோன் கழல்வெல்க 10
ஈச னடிபோற்றி எந்தை யடிபோற்றி
தேச னடிபோற்றி சிவன்சே வடிபோற்றி
நேயத்தே நின்ற நிமல னடிபோற்றி
மாயப் பிறப்பறுக்கும் மன்ன னடிபோற்றி
சீரார் பெருந்துறைநம் தேவ னடிபோற்றி 15
ஆராத இன்பம் அருளுமலை போற்றி
சிவனவன்என் சிந்தையுள் நின்ற அதனால்
அவனரு ளாலே அவன்தாள் வணங்ங்கிச்
சிந்தை மகிழச் சிவபுரா ணந்தன்னை
முந்தை வினைமுழுதும் மோய உரைப்பன்யான் 20
கண்ணுதலான் தன்கருணைக் கண்காட்ட வந்தெய்தி
எண்ணுதற் கெட்டா எழிலார் கழலிறைஞ்சி
விண்ணிறைந்து மண்ணிறைந்து மிக்காய் விளங்கொளியாய்
எண்ணிறந் தெல்லை யிலாதானே நின்பெருஞ்சீர்
பொல்லா வினையேன் புகழுமா றொன்றறியேன் 25
புல்லாகிப் பூடாய்ப் புழுவாய் மரமாகிப்
பல்விருக மாகிப் பறவையாய்ப் பாம்பாகிக்
கல்லாய் மனிதராய்ப் பேயாய்க் கணங்களாய்
வல்லசுர ராகி முனிவராய்த் தேவராய்ச்
செல்லாஅ நின்றஇத் தாவர சங்கமத்துள் 30
எல்லாப் பிறப்பும் பிறந்திளைத்தேன் எம்பெருமான்
மெய்யேஉன் பொன்னடிகள் கண்டின்று வீடுற்றேன்
உய்யஎன் உள்ளத்துள் ஓங்கார மாய்நின்ற
மெய்யா விமலா விடைப்பாகா வேதங்கள்
ஐயா எனஓங்கி ஆழ்ந்தகன்ற நுண்ணியனே 35
வெய்யாய் தணியாய் இயமான னாம்விமலா
பொய்யா யினவெல்லாம் போயகல வந்தருளி
மெய்ஞ்ஞான மாகி மிளிர்கின்ற மெய்ச்சுடரே
எஞ்ஞானம் இல்லாதேன் இன்பப் பெருமானே
அஞ்ஞானம் தன்னை அகல்விக்கும் நல்லறிவே 40
ஆக்கம் அளவிறுதி இல்லாய் அனைத்துலகும்
ஆக்குவாய் காப்பாய் அழிப்பாய் அருள்தருவாய்
போக்குவாய் என்னைப் புகுவிப்பாய் நின்தொழும்பின்
நாற்றத்தின் நேரியாய் சேயாய் நணியானே
மாற்றம் மனங்கழிய நின்ற மறையோனே 45
கறந்தபால் கன்னலொடு நெய்கலந்தாற் போலச்
சிறந்தடியார் சிந்தனையுள் தேனூறி நின்று
பிறந்த பிறப்பறுக்கும் எங்கள் பெருமான்
நிறங்களோ ரைந்துடையாய் விண்ணோர்க ளேத்த
மறைந்திருந்தாய் எம்பெருமான் வல்வினையேன் தன்னை 50
மறைந்திட மூடிய மாய இருளை
அறம்பாவம் என்னும் அருங்கயிற்றாற் கட்டிப்
புறந்தோல்போர்த் தெங்கும் புழுவழுக்கு மூடி
மலஞ்சோரும் ஒன்பது வாயிற் குடிலை
மலங்கப் புலனைந்தும் வஞ்சனையைச் செய்ய 55
விலங்கு மனத்தால் விமலா உனக்குக்
கலந்தஅன் பாகிக் கசிந்துள் ளுருகும்
நலந்தான் இலாத சிறியேற்கு நல்கி
நிலந்தன்மேல் வந்தருளி நீள்கழல்கள் காஅட்டி
நாயிற் கடையாய்க் கிடந்த அடியேற்குத் 60
தாயிற் சிறந்த தயாவான தத்துவனே
மாசற்ற சோதி மலர்ந்த மலர்ச்சுடரே
தேசனே தேனா ரமுதே சிவபுரனே
பாசமாம் பற்றறுத்துப் பாரிக்கும் ஆரியனே
நேச அருள்புரிந்து நெஞ்சில்வஞ் சங்கெடப் 65
பேராது நின்ற பெருங்கருணைப் பேராறே
ஆரா அமுதே அளவிலாப் பெம்மானே
ஓராதார் உள்ளத் தொளிக்கும் ஒளியானே
நீராய் உருக்கியென் ஆருயிராய் நின்றானே
இன்பமுந் துன்பமும் இல்லானே உள்ளானே 70
அன்பருக் கன்பனே யாவையுமாய் அல்லையுமாஞ்
சோதியனே துன்னிருளே தோன்றாப் பெருமையனே
ஆதியனே அந்தம் நடுவாகி அல்லானே
ஈர்த்தென்னை யாட்கொண்ட எந்தை பெருமானே
கூர்த்தமெய்ஞ் ஞானத்தாற் கொண்டுணர்வார் தங்கருத்தின் 75
நோக்கரிய நோக்கே நுணுக்கரிய நுண்ணுணர்வே
போக்கும் வரவும் புணர்வுமிலாப் புண்ணியனே
காக்குமெங் காவலனே காண்பரிய பேரொளியே
ஆற்றின்ப வெள்ளமே அத்தாமிக் காய்நின்ற
தோற்றச் சுடரொளியாய்ச் சொல்லாத நுண்ணுணர்வாய்80
மாற்றமாம் வையகத்தின் வெவ்வேறே வந்தறிவாம்
தேற்றனே தேற்றத் தெளிவேஎன் சிந்தனையுள்
ஊற்றான உண்ணா ரமுதே உடையானே
வேற்று விகார விடக்குடம்பி னுட்கிடப்ப
ஆற்றேன்எம் ஐயா அரனேஓ என்றென்று 85
போற்றிப் புகழ்ந்திருந்து பொய்கெட்டு மெய்ஆனார்
மீட்டிங்கு வந்து வினைப்பிறவி சாராமே
கள்ளப் புலக்குரம்பை கட்டழிக்க வல்லானே
நள்ளிருளில் நட்டம் பயின்றாடும் நாதனே
தில்லையுட் கூத்தனே தென்பாண்டி நாட்டானே 90
அல்லற் பிறவி அறுப்பானே ஓஎன்று
சொல்லற் கரியானைச் சொல்லித் திருவடிக்கீழ்ச்
சொல்லிய பாட்டின் பொருளுணர்ந்து சொல்லுவார்
செல்வர் சிவபுரத்தின் உள்ளார் சிவனடிக்கீழ்ப்
பல்லோரும் ஏத்தப் பணிந்து. 95

ನಮಚ್ಚಿವಾಯ ವಾಅೞ್ಗ ನಾದನ್ತಾಳ್ ವಾೞ್ಗ
ಇಮೈಪ್ಪೊೞುದುಂ ಎನ್ನೆಂಜಿಲ್ ನೀಂಗಾದಾನ್ ತಾಳ್ವಾೞ್ಗ
ಕೋಹೞಿ ಯಾಂಡ ಕುರುಮಣಿದನ್ ತಾಳ್ವಾೞ್ಗ
ಆಹಮ ಮಾಹಿನಿನ್ ಱಣ್ಣಿಪ್ಪಾನ್ ತಾಳ್ವಾೞ್ಗ
ಏಹನ್ ಅನೇಹನ್ ಇಱೈವ ನಡಿವಾೞ್ಗ ೫
ವೇಹಙ್ ಕೆಡುತ್ತಾಂಡ ವೇಂದನಡಿ ವೆಲ್ಗ
ಪಿಱಪ್ಪಱುಕ್ಕುಂ ಪಿಞ್ಞಹಂಡ್ರನ್ ಪೆಯ್ಗೞಲ್ಗಳ್ ವೆಲ್ಗ
ಪುಱತ್ತಾರ್ಕ್ಕುಚ್ ಚೇಯೋಂಡ್ರನ್ ಪೂಂಗೞಲ್ಗಳ್ ವೆಲ್ಗ
ಕರಂಗುವಿವಾರ್ ಉಳ್ಮಹಿೞುಙ್ ಕೋನ್ಕೞಲ್ಗಳ್ ವೆಲ್ಗ
ಸಿರಂಗುವಿವಾರ್ ಓಂಗುವಿಕ್ಕುಞ್ ಸೀರೋನ್ ಕೞಲ್ವೆಲ್ಗ ೧೦
ಈಸ ನಡಿಬೋಟ್ರಿ ಎಂದೈ ಯಡಿಬೋಟ್ರಿ
ತೇಸ ನಡಿಬೋಟ್ರಿ ಸಿವನ್ಚೇ ವಡಿಬೋಟ್ರಿ
ನೇಯತ್ತೇ ನಿಂಡ್ರ ನಿಮಲ ನಡಿಬೋಟ್ರಿ
ಮಾಯಪ್ ಪಿಱಪ್ಪಱುಕ್ಕುಂ ಮನ್ನ ನಡಿಬೋಟ್ರಿ
ಸೀರಾರ್ ಪೆರುಂದುಱೈನಂ ತೇವ ನಡಿಬೋಟ್ರಿ ೧೫
ಆರಾದ ಇನ್ಬಂ ಅರುಳುಮಲೈ ಪೋಟ್ರಿ
ಸಿವನವನ್ಎನ್ ಸಿಂದೈಯುಳ್ ನಿಂಡ್ರ ಅದನಾಲ್
ಅವನರು ಳಾಲೇ ಅವನ್ತಾಳ್ ವಣಙ್ಂಗಿಚ್
ಸಿಂದೈ ಮಹಿೞಚ್ ಚಿವಬುರಾ ಣಂದನ್ನೈ
ಮುಂದೈ ವಿನೈಮುೞುದುಂ ಮೋಯ ಉರೈಪ್ಪನ್ಯಾನ್ ೨೦
ಕಣ್ಣುದಲಾನ್ ತನ್ಕರುಣೈಕ್ ಕಣ್ಗಾಟ್ಟ ವಂದೆಯ್ದಿ
ಎಣ್ಣುದಱ್ ಕೆಟ್ಟಾ ಎೞಿಲಾರ್ ಕೞಲಿಱೈಂಜಿ
ವಿಣ್ಣಿಱೈಂದು ಮಣ್ಣಿಱೈಂದು ಮಿಕ್ಕಾಯ್ ವಿಳಂಗೊಳಿಯಾಯ್
ಎಣ್ಣಿಱನ್ ದೆಲ್ಲೈ ಯಿಲಾದಾನೇ ನಿನ್ಬೆರುಂಜೀರ್
ಪೊಲ್ಲಾ ವಿನೈಯೇನ್ ಪುಹೞುಮಾ ಱೊಂಡ್ರಱಿಯೇನ್ ೨೫
ಪುಲ್ಲಾಹಿಪ್ ಪೂಡಾಯ್ಪ್ ಪುೞುವಾಯ್ ಮರಮಾಹಿಪ್
ಪಲ್ವಿರುಹ ಮಾಹಿಪ್ ಪಱವೈಯಾಯ್ಪ್ ಪಾಂಬಾಹಿಕ್
ಕಲ್ಲಾಯ್ ಮನಿದರಾಯ್ಪ್ ಪೇಯಾಯ್ಕ್ ಕಣಂಗಳಾಯ್
ವಲ್ಲಸುರ ರಾಹಿ ಮುನಿವರಾಯ್ತ್ ತೇವರಾಯ್ಸ್
ಸೆಲ್ಲಾಅ ನಿಂಡ್ರಇತ್ ತಾವರ ಸಂಗಮತ್ತುಳ್ ೩೦
ಎಲ್ಲಾಪ್ ಪಿಱಪ್ಪುಂ ಪಿಱಂದಿಳೈತ್ತೇನ್ ಎಂಬೆರುಮಾನ್
ಮೆಯ್ಯೇಉನ್ ಪೊನ್ನಡಿಹಳ್ ಕಂಡಿಂಡ್ರು ವೀಡುಟ್ರೇನ್
ಉಯ್ಯಎನ್ ಉಳ್ಳತ್ತುಳ್ ಓಂಗಾರ ಮಾಯ್ನಿಂಡ್ರ
ಮೆಯ್ಯಾ ವಿಮಲಾ ವಿಡೈಪ್ಪಾಹಾ ವೇದಂಗಳ್
ಐಯಾ ಎನಓಂಗಿ ಆೞ್ಂದಹಂಡ್ರ ನುಣ್ಣಿಯನೇ ೩೫
ವೆಯ್ಯಾಯ್ ತಣಿಯಾಯ್ ಇಯಮಾನ ನಾಮ್ವಿಮಲಾ
ಪೊಯ್ಯಾ ಯಿನವೆಲ್ಲಾಂ ಪೋಯಹಲ ವಂದರುಳಿ
ಮೆಯ್ಞ್ಞಾನ ಮಾಹಿ ಮಿಳಿರ್ಗಿಂಡ್ರ ಮೆಯ್ಸ್ಚುಡರೇ
ಎಞ್ಞಾನಂ ಇಲ್ಲಾದೇನ್ ಇನ್ಬಪ್ ಪೆರುಮಾನೇ
ಅಞ್ಞಾನಂ ತನ್ನೈ ಅಹಲ್ವಿಕ್ಕುಂ ನಲ್ಲಱಿವೇ ೪೦
ಆಕ್ಕಂ ಅಳವಿಱುದಿ ಇಲ್ಲಾಯ್ ಅನೈತ್ತುಲಹುಂ
ಆಕ್ಕುವಾಯ್ ಕಾಪ್ಪಾಯ್ ಅೞಿಪ್ಪಾಯ್ ಅರುಳ್ದರುವಾಯ್
ಪೋಕ್ಕುವಾಯ್ ಎನ್ನೈಪ್ ಪುಹುವಿಪ್ಪಾಯ್ ನಿನ್ತೊೞುಂಬಿನ್
ನಾಟ್ರತ್ತಿನ್ ನೇರಿಯಾಯ್ ಸೇಯಾಯ್ ನಣಿಯಾನೇ
ಮಾಟ್ರಂ ಮನಂಗೞಿಯ ನಿಂಡ್ರ ಮಱೈಯೋನೇ ೪೫
ಕಱಂದಬಾಲ್ ಕನ್ನಲೊಡು ನೆಯ್ಗಲಂದಾಱ್ ಪೋಲಚ್
ಸಿಱಂದಡಿಯಾರ್ ಸಿಂದನೈಯುಳ್ ತೇನೂಱಿ ನಿಂಡ್ರು
ಪಿಱಂದ ಪಿಱಪ್ಪಱುಕ್ಕುಂ ಎಂಗಳ್ ಪೆರುಮಾನ್
ನಿಱಂಗಳೋ ರೈಂದುಡೈಯಾಯ್ ವಿಣ್ಣೋರ್ಗ ಳೇತ್ತ
ಮಱೈಂದಿರುಂದಾಯ್ ಎಂಬೆರುಮಾನ್ ವಲ್ವಿನೈಯೇನ್ ತನ್ನೈ ೫೦
ಮಱೈಂದಿಡ ಮೂಡಿಯ ಮಾಯ ಇರುಳೈ
ಅಱಂಬಾವಂ ಎನ್ನುಂ ಅರುಂಗಯಿಟ್ರಾಱ್ ಕಟ್ಟಿಪ್
ಪುಱಂದೋಲ್ಬೋರ್ತ್ ತೆಂಗುಂ ಪುೞುವೞುಕ್ಕು ಮೂಡಿ
ಮಲಂಜೋರುಂ ಒನ್ಬದು ವಾಯಿಱ್ ಕುಡಿಲೈ
ಮಲಂಗಪ್ ಪುಲನೈಂದುಂ ವಂಜನೈಯೈಚ್ ಚೆಯ್ಯ ೫೫
ವಿಲಂಗು ಮನತ್ತಾಲ್ ವಿಮಲಾ ಉನಕ್ಕುಕ್
ಕಲಂದಅನ್ ಪಾಹಿಕ್ ಕಸಿಂದುಳ್ ಳುರುಹುಂ
ನಲಂದಾನ್ ಇಲಾದ ಸಿಱಿಯೇಱ್ಕು ನಲ್ಗಿ
ನಿಲಂದನ್ಮೇಲ್ ವಂದರುಳಿ ನೀಳ್ಗೞಲ್ಗಳ್ ಕಾಅಟ್ಟಿ
ನಾಯಿಱ್ ಕಡೈಯಾಯ್ಕ್ ಕಿಡಂದ ಅಡಿಯೇಱ್ಕುತ್ ೬೦
ತಾಯಿಱ್ ಸಿಱಂದ ತಯಾವಾನ ತತ್ತುವನೇ
ಮಾಸಟ್ರ ಸೋದಿ ಮಲರ್ಂದ ಮಲರ್ಸ್ಚುಡರೇ
ತೇಸನೇ ತೇನಾ ರಮುದೇ ಸಿವಬುರನೇ
ಪಾಸಮಾಂ ಪಟ್ರಱುತ್ತುಪ್ ಪಾರಿಕ್ಕುಂ ಆರಿಯನೇ
ನೇಸ ಅರುಳ್ಬುರಿಂದು ನೆಂಜಿಲ್ವಞ್ ಸಂಗೆಡಪ್ ೬೫
ಪೇರಾದು ನಿಂಡ್ರ ಪೆರುಂಗರುಣೈಪ್ ಪೇರಾಱೇ
ಆರಾ ಅಮುದೇ ಅಳವಿಲಾಪ್ ಪೆಮ್ಮಾನೇ
ಓರಾದಾರ್ ಉಳ್ಳತ್ ತೊಳಿಕ್ಕುಂ ಒಳಿಯಾನೇ
ನೀರಾಯ್ ಉರುಕ್ಕಿಯೆನ್ ಆರುಯಿರಾಯ್ ನಿಂಡ್ರಾನೇ
ಇನ್ಬಮುನ್ ದುನ್ಬಮುಂ ಇಲ್ಲಾನೇ ಉಳ್ಳಾನೇ ೭೦
ಅನ್ಬರುಕ್ ಕನ್ಬನೇ ಯಾವೈಯುಮಾಯ್ ಅಲ್ಲೈಯುಮಾಞ್
ಸೋದಿಯನೇ ತುನ್ನಿರುಳೇ ತೋಂಡ್ರಾಪ್ ಪೆರುಮೈಯನೇ
ಆದಿಯನೇ ಅಂದಂ ನಡುವಾಹಿ ಅಲ್ಲಾನೇ
ಈರ್ತ್ತೆನ್ನೈ ಯಾಟ್ಕೊಂಡ ಎಂದೈ ಪೆರುಮಾನೇ
ಕೂರ್ತ್ತಮೆಯ್ಞ್ ಞಾನತ್ತಾಱ್ ಕೊಂಡುಣರ್ವಾರ್ ತಂಗರುತ್ತಿನ್ ೭೫
ನೋಕ್ಕರಿಯ ನೋಕ್ಕೇ ನುಣುಕ್ಕರಿಯ ನುಣ್ಣುಣರ್ವೇ
ಪೋಕ್ಕುಂ ವರವುಂ ಪುಣರ್ವುಮಿಲಾಪ್ ಪುಣ್ಣಿಯನೇ
ಕಾಕ್ಕುಮೆಙ್ ಕಾವಲನೇ ಕಾಣ್ಬರಿಯ ಪೇರೊಳಿಯೇ
ಆಟ್ರಿನ್ಬ ವೆಳ್ಳಮೇ ಅತ್ತಾಮಿಕ್ ಕಾಯ್ನಿಂಡ್ರ
ತೋಟ್ರಚ್ ಚುಡರೊಳಿಯಾಯ್ಸ್ ಸೊಲ್ಲಾದ ನುಣ್ಣುಣರ್ವಾಯ್೮೦
ಮಾಟ್ರಮಾಂ ವೈಯಹತ್ತಿನ್ ವೆವ್ವೇಱೇ ವಂದಱಿವಾಂ
ತೇಟ್ರನೇ ತೇಟ್ರತ್ ತೆಳಿವೇಎನ್ ಸಿಂದನೈಯುಳ್
ಊಟ್ರಾನ ಉಣ್ಣಾ ರಮುದೇ ಉಡೈಯಾನೇ
ವೇಟ್ರು ವಿಹಾರ ವಿಡಕ್ಕುಡಂಬಿ ನುಟ್ಕಿಡಪ್ಪ
ಆಟ್ರೇನ್ಎಂ ಐಯಾ ಅರನೇಓ ಎಂಡ್ರೆಂಡ್ರು ೮೫
ಪೋಟ್ರಿಪ್ ಪುಹೞ್ಂದಿರುಂದು ಪೊಯ್ಗೆಟ್ಟು ಮೆಯ್ಆನಾರ್
ಮೀಟ್ಟಿಂಗು ವಂದು ವಿನೈಪ್ಪಿಱವಿ ಸಾರಾಮೇ
ಕಳ್ಳಪ್ ಪುಲಕ್ಕುರಂಬೈ ಕಟ್ಟೞಿಕ್ಕ ವಲ್ಲಾನೇ
ನಳ್ಳಿರುಳಿಲ್ ನಟ್ಟಂ ಪಯಿಂಡ್ರಾಡುಂ ನಾದನೇ
ತಿಲ್ಲೈಯುಟ್ ಕೂತ್ತನೇ ತೆನ್ಬಾಂಡಿ ನಾಟ್ಟಾನೇ ೯೦
ಅಲ್ಲಱ್ ಪಿಱವಿ ಅಱುಪ್ಪಾನೇ ಓಎಂಡ್ರು
ಸೊಲ್ಲಱ್ ಕರಿಯಾನೈಚ್ ಚೊಲ್ಲಿತ್ ತಿರುವಡಿಕ್ಕೀೞ್ಸ್
ಸೊಲ್ಲಿಯ ಪಾಟ್ಟಿನ್ ಪೊರುಳುಣರ್ಂದು ಸೊಲ್ಲುವಾರ್
ಸೆಲ್ವರ್ ಸಿವಬುರತ್ತಿನ್ ಉಳ್ಳಾರ್ ಸಿವನಡಿಕ್ಕೀೞ್ಪ್
ಪಲ್ಲೋರುಂ ಏತ್ತಪ್ ಪಣಿಂದು. ೯೫
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ತಿರುತ್ತಣಿ ಸುವಾಮಿನಾದನ್,
ಉರಿಮೈ: ವರ್ತ್ತಮಾನನ್, ಸೆನ್ನೈ ೬೦೦೦೧೭
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

1. ಶಿವಪುರಾಣ
[ತಿರುಪೆರುಂದುರೈ ಕ್ಷೇತ್ರದಲ್ಲಿ ಅನುಗ್ರಹಿಸಿದುದು]
ಶಿವನ ಅನಾದಿಯ ಹಿರಿಮೆ
ಶ್ರೀ ಸಿಟ್ರಂಬಲಂ
ನಮಃ ಶಿವಾಯವೆಂಬ ಪಂಚಾಕ್ಷರಗಳು ಬಾಳ್ಗೆ. ಪಂಚಾಕ್ಷರಗಳ ಸಾರವಾಗಿ ಶೋಭಿಸುವ ಭಗವಂತನ ಪವಿತ್ರ ಪಾದಗಳು ಬಾಳ್ಗೆ. ಕಣ್ಣೆವೆ ಮಿಟುಕಿಸುವಷ್ಟು ಸಮಯವೂ ಭಕ್ತನ ಬಿಟ್ಟಗಲದ ಪವಿತ್ರ ಪಾದಗಳು ಬಾಳ್ಗೆ. ಕೋಗಳಿ ಎಂಬ ಸ್ಥಳದಲ್ಲಿ ನೆಲೆಸಿ ಅನುಗ್ರಹಿಸಿದ ಗುರುಮೂರ್ತಿಯ ಪವಿತ್ರಪಾದ ಬಾಳ್ಗೆ. ಶಿವಾಗಮದ ಸಾಕಾರ ರೂಪವಾಗಿ ನಿಂತು ಸುಖವ ನೀಡುವ ಭಗವಂತನ ಪವಿತ್ರ ಪಾದ ಬಾಳ್ಗೆ. ಏಕವೂ ಅನೇಕವೂ ಆದ ದೇವನ ಪವಿತ್ರ ಪಾದ ಬಾಳ್ಗೆ. (5)
ಮನೋವೇಗವ ನೀಗಿಸಿ ನನಗೆ ಆಶ್ರಯ ನೀಡಿದ ಪರಿಪೂರ್ಣನ ಪವಿತ್ರ ಪಾದಗಳು ಗೆಲ್ಗೆ. ಭವದ ಬಂಧನವ ನಾಶಗೈವ ವೀರ ಪೆಂಡೆಯ ತೊಟ್ಟ ಪವಿತ್ರ ಪಾದಗಳು ಗೆಲ್ಗೆ. ತನ್ನನ್ನು ನಮಿಸದಿರುವ ಅನ್ಯರಿಗೆ ನಿಲುಕದವನ ತಾವರೆ ಹೂವಿನಂತ ಪಾದಗಳು ಗೆಲ್ಗೆ. ಕೈ ಜೋಡಿಸಿ ನಮಿಸುವವರಿಗೆ ಸಂತಸದಿ ದಯೆಗೈವ ದೇವನ ಪವಿತ್ರಪಾದಗಳು ಗೆಲ್ಗೆ. ತಲೆ ಮೇಲೆ ಕೈಗಳ ಜೋಡಿಸಿ ನಮಿಸುವ ಶರಣರನ್ನು ಉನ್ನತ ಶಿವ ಪದದಿ ಇರಿಸುವ ಮಹಾ ಮಹಿಮನ ಪವಿತ್ರ ಪಾದಗಳು ಗೆಲ್ಗೆ. (10)
ಶಿವನ ಪವಿತ್ರ ಪಾದಗಳ ಸ್ತುತಿಸುವೆ. ನಮ್ಮ ತಂದೆಯ ಪವಿತ್ರಪಾದಗಳ ಸ್ತುತಿಸುವೆ. ತೇಜೋ ರೂಪನ ಪವಿತ್ರಪಾದಗಳ ಸ್ತುತಿಸುವೆ. ಶಿವ ಪರಮಾತ್ಮನ ಪವಿತ್ರಪಾದಗಳ ಸ್ತುತಿಸುವೆ. ಭಕ್ತರ ಪ್ರೀತಿ ಬಲೆಗೆ ಸೆಲೆಸಿಲುಕಿ ಅಚಲನಾಗಿ ನಿಂತ ನಿರ್ಮಲನ ಪವಿತ್ರಪಾದಗಳ ಸ್ತುತಿಸುವೆ. ಅಶಾಶ್ವತವಾದ ಭವವನ್ನು ನಾಶಗೈವ ಒಡೆಯನ ಪವಿತ್ರಪಾದಗಳ ಸ್ತುತಿಸುವೆ. ಶ್ರೀಪೆರುಂದುರೈಯಲ್ಲಿ ನೆಲೆಸಿ ದಯೆಗೈವ ನಮ್ಮ ದೇವನ ಪವಿತ್ರಪಾದಗಳ ಸ್ತುತಿಸುವೆ. (15)
ಎಂದಿಗೂ ಬತ್ತದ ನಿರಂತರ ಸುಖವನ್ನು ನಿಜಭಕ್ತರಿಗೆ ಪ್ರಸಾದಿಸುವ ಕರುಣಾ ಪರ್ವತನ ಸ್ತುತಿಸುವೆ. ಶಿವ ಪರಮಾತ್ಮನಾದ ದಯಾಸಾಗರನು ನನ್ನ ಮನದಲ್ಲಿ ನೆಲೆಸಿಹನು. ಅವನ ಕೃಪೆ ಯಿಂದಲೇ ಅವನ ಪವಿತ್ರ ಪಾದಗಳ ಸ್ತುತಿಸುವೆ. ಅವನ ಮನಸ್ಸಿಗೆ ಸಂತೋಷವಾಗುವಂತೆ, ಎನ್ನ ಹಿಂದಿನ ಕರ್ಮಗಳೆಲ್ಲಾ ಸವೆಯುವಂತೆ ಶಿವನ ಅನಾದಿಯ ಹಿರಿಮೆಯನ್ನು ಸ್ತುತಿಸುವೆ. (20)
ನೆತ್ತಿಯಲ್ಲಿ ಕಣ್ಣುಳ್ಳವನ ನೇತ್ರಗಳು ದಾರಿತೋರೆ ಅದೇ ಮಾರ್ಗದಿ ಸಾಗಿ ಬಂದೆ. ಮಾತಿಗೆ ನಿಲುಕದ, ಮನದಲ್ಲೂ ಕಲ್ಪಿಸಲಾಗದ ಚೆಲುವನ ಪವಿತ್ರ ಪಾದಗಳಿಗೆರಗುವೆ. ಗಗನವನಾವರಿಸಿ, ಭೂಮಿಯನಾವರಿಸಿ ಆ ಎಡೆಯೂ ಸಾಲದಾಗಲು ಅವೆಲ್ಲವನ್ನೂ ದಾಟಿ ನಿಂತವನೇ! ಸದಾ ಪ್ರಜ್ವಲಿಸುವ ಜ್ಯೋತಿ ರೂಪವಾಗಿ ನಿಂತವನೇ! ಸೀಮೆಗಳ ಮೀರಿದ ಸೀಮಾತೀತನೇ! ನಿನ್ನ ಅಪಾರ ಕೀರ್ತಿಯನ್ನು ಪಾಪಾತ್ಮನಾದ ನಾನು ಹೊಗಳಿ ಸ್ತುತಿಸುವ ಬಗೆಯ ಇನಿತೂ ಅರಿಯೆ. (25)
ಹುಲ್ಲಾಗಿ, ಸೊಪ್ಪಾಗಿ, ಹುಳುವಾಗಿ, ಮರವಾಗಿ, ಹಲ ವಿಧದ ಪ್ರಾಣಿ ಪಕ್ಷಿಗಳಾಗಿ, ಹಾವಾಗಿ, ಕಲ್ಲಾಗಿ, ಮನುಜನಾಗಿ, ಭೂತವಾಗಿ, ಗಣಗಳಾಗಿ, ಬಲಿಷ್ಟ ಅಸುರರಾಗಿ, ಮುನಿಗಳಾಗಿ, ದೇವಾನು ದೇವತೆಗಳಾಗಿ, ಚರಾಚರಗಳೆಂಬ ಇಬ್ಬಗೆಯ ವಸ್ತುಗಳಲ್ಲೂ, (30)
ಹಲ ಬಗೆಯ ಹುಟ್ಟುಗಳಲ್ಲೂ ಬಂದು ತೊಳಲುತಿಹೆನು. ನನ್ನೊಡೆಯನೇ! ಕನಕಸದೃಶವಾದ ನಿನ್ನ ಪಾದಗಳ ಕಂಡು ನಿಜಮುಕ್ತಿಯ ಪಡೆದುಕೊಂಡೆ. ಭಕ್ತನ ಸಂಕಟವ ನೀಗಿಸಲು ಮನದಿ ನೆಲೆಸಿ ಪ್ರಾಣ ಸ್ವರೂಪನಾಗಿ ಶೋಭಿಸುವ ನಿತ್ಯನೇ! ನಿರ್ಮಲನೇ! ವೃಷಭವಾಹನನೇ! ವೇದಗಳೆಲ್ಲವೂ ‘ತಂದೆ’ ಎಂದು ಸ್ತುತಿಸುವ ಹಿರಿಮೆ, ಆಳ, ವಿಶಾಲತೆಯುಳ್ಳ ಸೂಕ್ಷ್ಮ ಸ್ವರೂಪನೇ! (35)
ಶೀತೋಷ್ಣ ಗುಣದವನೇ! ಆತ್ಮ ಸ್ವರೂಪನಾಗಿ ಶೋಭಿಸುವ ನಿರ್ಮಲನೇ! ಹುಸಿಯಾದವೆಲ್ಲವೂ ನಶಿಸಿ ಹೋಗುವಂತೆ ದಯೆಗೈದವನೇ! ಸತ್ಯಜ್ಞಾನ ಸ್ವರೂಪನಾಗಿ ಶೋಭಿಸುವ ನಿತ್ಯ ಕಾಂತಿ ಸ್ವರೂಪನೇ! ಸತ್ಯದ ಅರಿವು ಇನಿತೂ ಇಲ್ಲದ ಎನಗೆ ಮೋಕ್ಷ ಸುಖವ ಕರುಣಿಸಿದ ಶಿವಪರಮಾತ್ಮನೆ ಅಜ್ಞಾನವೆಂಬ ಮಾಯೆಯ ಕಳೆದು ಕೃಪೆಗೈದ ಪರಜ್ಞಾನ ಸ್ವರೂಪನೇ! (40)
ರೂಪ, ಎಲ್ಲೆ, ಅಂತ್ಯ ರಹಿತನೇ! ಸರ್ವಲೋಕಗಳನ್ನು ಸೃಷ್ಟಿಸುವೆ, ರಕ್ಷಿಸುವೆ, ನಾಶಗೈವೆ ದಯೆಗೈವೆ, ಭವವೆಂಬ ನೋವ ನೀಗಿಸುವೆ, ಭಕ್ತನನ್ನು ನಿನ್ನ ಕೃಪಾಕಟಾಕ್ಷದಲ್ಲಿರಿಸುವೆ. ನಿನ್ನನ್ನು ಪಡೆಯಬಯಸುವವರಿಗೆ ನೇರವಾದ ಮಾರ್ಗವ ತೋರುವವನೇ. ನಿನಗೆ ಎರಗದವರಿಗೆ ದೂರನಾದವನೇ! ನಿನ್ನ ಭಕ್ತರಿಗೆ ಸಮೀಪನಾದವನೇ! ಮಾತಿಗೆ, ಮನಸ್ಸಿಗೆ ನಿಲುಕದ ಗೂಡಾರ್ಥನೇ. (45)
ಕರೆದ ಹಾಲಿಗೆ ಕಬ್ಬಿನರಸ, ತುಪ್ಪ, ಸಕ್ಕರೆ ಸೇರಿಸಿದಂತೆ ಪ್ರೀತಿಪಾತ್ರರ ಮನದಲ್ಲಿ ಜೇನಿನಂತೆ ಸವಿಯಾಗಿ ನೆಲೆಸಿ, ಎನ್ನ ಭವಗಳನ್ನೆಲ್ಲಾ ನೀಗಿಸುವ ಪರಮಾತ್ಮನೇ! ಸೃಷ್ಟಿ ಮೊದಲಾದ ಪಂಚಕಾರ್ಯಗಳಿಗೆ ಕಾರಣಕರ್ತನಾದ ಪಂಚಾಕ್ಷರನೇ! ದೇವಗಣಗಳು ಸ್ತುತಿಗೈಯುತ್ತಿರೆ ಅವರಿಗೆ ಗೋಚರಿಸದಂತೆ ಅಗೋಚರನಾದವನೇ! ನಮ್ಮ ಒಡೆಯನೇ ಪಾಪಕರ್ಮನು ನಾನು (50)
ನನ್ನನ್ನು ಮರೆಮಾಚಿ ಆವರಿಸಿರುವ ಮಾಯಾ ಮಲಗಳು ಅಜ್ಞಾನ, ಪಾಪಗಳೆಂಬ ಪಾಶದಲ್ಲಿ ಬಂಧಿಸಿವೆ. ಹೊರಗೆ ಚರ್ಮವನ್ನು ಹೊದಿಸಿಕೊಂಡು, ಎಲ್ಲೆಡೆ ತುಂಬಿರುವ ಕ್ರಿಮಿಗಳನ್ನು, ಹೊಲಸನ್ನು ಮರೆಮಾಚಿದ, ಮಲವು ಸುರಿವ ನವದ್ವಾರಗಳುಳ್ಳ ದೇಹವೆಂಬ ಗುಡಿಸಲು ನೆಲೆತಪ್ಪುವಂತೆ ಪಂಚೇಂದ್ರಿಯಗಳು ವಂಚಿಸುತ್ತಿವೆ. (55)
ಹಾಗಾಗಿ ಮೃಗೀಯ ಮನಸ್ಸು ನಿನ್ನಿಂದ ದೂರವಾಗುತ್ತಿದೆ. ನಿರ್ಮಲನೇ ನಿನಗಾಗಿ ಹಾತೊರೆಯುವಂತಹ ನನಗಾಗಿ ಮನಕರಗಿ ದಯಗೈದೆ. ಭುವಿಗಿಳಿದು ಬಂದು ನಿನ್ನ ಪವಿತ್ರ ಪಾದಗಳ ದರ್ಶಿಸಿದೆ. ನಾಯಿಗಿಂತ ಕೀಳಾದ ಕಿಂಕರನಿಗೆ ಕೃಪೆ ತೋರಿದೆ. (60)
ತಾಯಿಗಿಂತಲೂ ಮಿಗಿಲಾದ ದಯೆತೋರಿದ ಸತ್ಯ ಶೀಲನೇ! ನಿಷ್ಕಳಂಕ ಕಾಂತಿ ಸೂಸುವ ಅಗಾಧ ಕಾಂತಿ ಸ್ವರೂಪನೇ! ಕೀರ್ತಿಯಿಂದ ಶೋಭಿಸುತ್ತಿರುವವನೇ! ಜೇನಿಗಿಂತ ಸವಿಯಾದ ಗುಣದವನೇ! ಪ್ರಿಯವಾದ ದೈವಾಮೃತವೇ! ಕೈಲಾಸದಲ್ಲಿ ನೆಲೆಸಿ ದಯೆಗೈದವನೇ! ಬಂಧ-ಪಾಶಗಳ ಸಂಬಂಧವ ಕತ್ತರಿಸಿ ರಕ್ಷಿಸುವ ಆಚಾರ್ಯನೇ. ಪ್ರೀತಿಯಿಂದ ಕೃಪೆದೋರಿ ನನ್ನ ಮನದ ವಂಚನೆಗಳ ನಾಶಪಡಿಸಿದವನೆ. (65)
ನಿತ್ಯ ನಿರಂತರ ದಯಾಸಾಗರನೇ! ಸವಿದಷ್ಟೂ ಸವಿಯ ಬೇಕೆನಿಸುವ ಅಮೃತ ಸದೃಶನೇ. ಅಪಾರ ಮಹಿಮಾ ಶೀಲನೇ! ಕಂಡರಿಯದವರ ಮನದಲ್ಲಿ ಅಗೋಚರವಾಗಿ ನಿಂತ ತೇಜೋ ಮೂರ್ತಿಯೇ! ಎನ್ನ ಮನವ ನೀರಿನಂತೆ ಕರಗಿಸಿ ಪ್ರಾಣವಾಯುವಾಗಿ ನಿಂತವನೇ! ಸುಖದುಃಖಾತೀತನೇ. (70)
ಪ್ರೀತಿಪಾತ್ರರಲ್ಲಿ ಪ್ರೀತಿಯುಳ್ಳವನೇ! ಭಕ್ತರಲ್ಲಿ ಅಪಾರವಾದ ಕರುಣೆಯುಳ್ಳವನೇ ಎಲ್ಲಾ ವಸ್ತುಗಳಾಗಿ, ಯಾವುದೂ ಆಗದ ಕಾಂತಿಸ್ವರೂಪನೇ! ಕಾರ್ಗತ್ತಲ ಸ್ವರೂಪನೇ! ಅರಿವಿಗೆ ನಿಲುಕದ ಮಹಾಮಹಿಮನೇ! ಸಕಲ ಬ್ರಹ್ಮಾಂಡಕ್ಕೂ ಆದಿಯಾದವನೇ! ಅಂತ್ಯವಾಗಿ, ಮಧ್ಯವಾಗಿ, ಯಾವುದೂ ಆಗದೆ ಸರ್ವವ್ಯಾಪಿಯಾದವನೆ. ನನ್ನನ್ನು ನಿನ್ನೆಡೆಗೆ ಸೆಳೆದು ಆಳ್ಗೊಂಡು ದಯೆಗೈವ ತಂದೆಯೇ! ಸತ್ಯಜಾ್ಞನದಿಂದ ಪರೀಕ್ಷಿಸಿದ ಅರಿವುಳ್ಳವರ ಅಭಿಪ್ರಾಯದಂತೆ. (75)
ನೋಡಲಸದಳವಾದ ನೋಟವೇ! ಸೂಕ್ಷ್ಮದೃಷ್ಟಿಗೆ ಕಾಣಲಾಗದ ಅತಿಸೂಕ್ಷ್ಮರೂಪನೇ ಸೃಷ್ಟಿ, ಲಯಗಳಿಗತೀತನಾದ ಪುಣ್ಯಸ್ವರೂಪನೇ. ನಮ್ಮನ್ನು ರಕ್ಷಿಸುವ ಒಡೆಯನೇ! ನೋಟಕ್ಕೆ ನಿಲುಕದ ಮಹಾಕಾಂತಿಯೇ! ಮಹಾನದಿಯಂತ ಸುಖದಾಯಕನೇ! ನಮ್ಮ ಒಡೆಯನೇ ತಂದೆಯೇ. (80)
ಶಾಶ್ವತವಾದ ತೇಜೋ ಮೂರ್ತಿಯಾಗಿ, ವರ್ಣಿಸಲಾಗದಷ್ಟು ಸೂಕ್ಷ್ಮವಾದ ಅರಿವಾಗಿ ಬದಲಾಗಿ ಭೂಮಿಯಲ್ಲಿ ನಾನಾ ವಸ್ತುಗಳಾಗಿ ತೋರಿದವನೇ. ಅರಿವಿನಿಂದ ಮಾತ್ರ ಅರಿಯಬಹುದಾದಂತಹ ಸ್ಪಷ್ಟಾತಿ ಸ್ಪಷ್ಟನೇ. ನನ್ನ ಮನದಲ್ಲಿ ಚಿಲುಮೆಯಂತೆ ಚಿಮ್ಮುವ ಸವಿಯಲಸದಳವಾದ ಅಮೃತ ಸ್ವರೂಪನೇ! ನನಗೆ ಶರಣ ಪದವ ಪ್ರಸಾದಿಸಿದವನೇ. ವಿಕಾರಗಳಿಂದಾವೃತವಾದ ರಕ್ತಮಾಂಸಗಳ ಈ ದೇಹದಲ್ಲಿ ನೆಲೆಸಲಾರೆ. ನನ್ನ ತಂದೆಯೇ. ಶಿವನೇ ಎಂದು ಮೊರೆಯಿಡುತಿರುವೆ. (85)
ಹಲದಿನಗಳು ಮೊರೆಯಿಟ್ಟು, ನಮಸ್ಕರಿಸಿ ನಿನ್ನ ಮಹಿಮೆಯನ್ನು ಹಲಬಾರಿ ಸ್ತುತಿಸಿ ಅಜ್ಞಾನವ ಕಳೆದು ಜ್ಞಾನ ಸ್ವರೂಪವಾದವರು ಮತ್ತೆ ಭುವಿಗೆ ಬಂದು, ಕರ್ಮದ ಫಲವಾಗಿ ಮರುಜನ್ಮ ಪಡೆಯದಂತೆ ಮುಕ್ತಿ ನೀಡಿದವನೇ. ವಂಚನೆಗೈವ ಪಂಚೇಂದ್ರಿಯಗಳಿಗೆ ಅವಾಸವಾಗಿರುವ ದೇಹದ ಬಂಧಪಾಶಗಳನ್ನು ಕಿತ್ತೊಗೆಯಬಲ್ಲವನೇ ನಟ್ಟಿರುಳಿನಲ್ಲಿ ನರ್ತಿಸುವ ನಾಥನೇ! ತಿಲ್ಲೈವನವಿರುವ ಚಿದಂಬರ ಕ್ಷೇತ್ರದಲ್ಲಿ ಪಂಚಕ್ರಿಯೆಗಳ ನರ್ತನ ಗೈದವನೇ! ರಮಣೀಯವಾದ ಪಾಂಡ್ಯ ನಾಡಿನವನೇ (90)
ಭವಬಂಧನದ ವೇದನೆಯ ನೀಗಿಸುವವನೇ ! ಓ ಎಂದು ಮೊರೆಯಿಟ್ಟು ಸ್ತುತಿಸಲು ಶ್ರೇಷ್ಠನಾದವನನ್ನು ಸ್ತುತಿಸುವವರು, ಅವನ ಪವಿತ್ರ ಪಾದಗಳ ಹಾಡಿ ಹೊಗಳಿದ ಗೀತೆಯ ಸಾರವನ್ನರಿತು ಸ್ತುತಿಸುವವರು, ಎಲ್ಲರೂ ಶಿವನಪುರವಾದ ಕೈಲಾಸದಲ್ಲಿ ಅವನ ಪವಿತ್ರಪಾದಗಳ ಬಳಿ ಶಾಶ್ವತವಾಗಿ ನೆಲೆಗೊಳ್ಳುವರು . (95)

ಕನ್ನಡಾನುವಾದ : ಜೆಯಲಲಿದಾ, 2014

சிற்பி